ಒಕ್ಕಲಿಗ ಸಮುದಾಯದ ಐಕ್ಯತೆಗಾಗಿ ಬೃಹತ್ ಕಾರ್ಯಕ್ರಮ: ಕೋಲಾರದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ ದಿವ್ಯ ಸಾನಿಧ್ಯ!
ಕೋಲಾರ ಜಿಲ್ಲೆಯ ಒಕ್ಕಲಿಗ ಸಮುದಾಯಕ್ಕೆ ಸಂಬಂಧಿಸಿದ ಮಹತ್ವದ ಸುದ್ದಿಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ನಿಖರ ಮಾಹಿತಿ ಪಡೆಯಲು ನಮ್ಮ ಬ್ಲಾಗ್‌ಗೆ ಭೇಟಿ ನೀಡಿ. ಸೆಪ್ಟೆಂಬರ್ 8, 2025 ರಂದು ನಡೆಯಲಿರುವ ಸಾಮಾಜಿಕ ಮತ್ತು ಆರ್ಥಿಕ ಜಾತಿಗಣತಿ ಕಾರ್ಯಾಗಾರ ಹಾಗೂ ಸಮುದಾಯದ ಐಕ್ಯತೆಯ ಕುರಿತ ಕಾರ್ಯಕ್ರಮದ ಸಂಪೂರ್ಣ ವಿವರ ಇಲ್ಲಿ ಲಭ್ಯವಿದೆ. ಸಮುದಾಯದ ಪ್ರಮುಖರಾದ ಪರಮಪೂಜ್ಯ ನಿರ್ಮಲಾನಂದನಾಥ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಒಕ್ಕಲಿಗರ ಐಕ್ಯತೆಯನ್ನು ಬಲಪಡಿಸಲು ಸಹಕರಿಸಿ.
COMMUNITY BLOGSFEDERATION ACTIVITIES
BGS EDITOR
9/5/20251 min read


ಕೋಲಾರ ಜಿಲ್ಲೆಯ ಒಕ್ಕಲಿಗ ಬಂಧುಗಳ ಗಮನಕ್ಕೆ!
ನಮಸ್ಕಾರ, ಆತ್ಮೀಯ ಕೋಲಾರ ಜಿಲ್ಲೆಯ ಎಲ್ಲ ಒಕ್ಕಲಿಗ ಬಂಧುಗಳೇ.
ಇಲ್ಲಿಯವರೆಗೆ, ಕೋಲಾರ ಜಿಲ್ಲೆಯಲ್ಲಿ ಸಮುದಾಯಕ್ಕೆ ಸಂಬಂಧಿಸಿದ ಸರಿಯಾದ ಮಾಹಿತಿ, ಒಳಪಂಗಡಗಳ ಐಕ್ಯತೆ ಮತ್ತು ಸಮುದಾಯದ ಕಾರ್ಯಕ್ರಮಗಳ ಕುರಿತು ಯಾವುದೇ ವೇದಿಕೆಗಳು ಸಕ್ರಿಯವಾಗಿರಲಿಲ್ಲ. ಇದರಿಂದಾಗಿ, ಸಮುದಾಯದ ಐಕ್ಯತೆ ಮತ್ತು ಅಸ್ಮಿತೆಗಳಿಗೆ ರಾಜಕೀಯ ಭಾವನೆಯಿಂದ ಅಪಮಾನವಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ.
ಇದಕ್ಕೆ ಒಂದು ಉದಾಹರಣೆ ಎಂದರೆ, ಇಲ್ಲಿಯವರೆಗೂ ಜಿಲ್ಲೆಯ ಯಾವುದೇ ತಾಲೂಕಿನಲ್ಲಿ ಬಡವ-ಶ್ರೀಮಂತ ಎಂಬ ಭೇದವಿಲ್ಲದೆ, ಕೇವಲ ಒಕ್ಕಲುತನವೇ ಶ್ರೇಷ್ಠ ಮತ್ತು ಕೆಂಪೇಗೌಡರ ಆದರ್ಶವೇ ನಮಗೆ ಪ್ರೇರಣೆ ಎಂಬ ಭಾವನೆಯಲ್ಲಿ ಯಾರೊಬ್ಬರೂ ಸಂಘಟನೆಯಾಗಿರಲಿಲ್ಲ. ಒಂದು ವೇಳೆ ಸಂಘಟನೆಯಾಗಿದ್ದರೆ, ಅವರಿಗೆ ನಮ್ಮ ಧನ್ಯವಾದಗಳು.
ಈ ಹಿನ್ನೆಲೆಯಲ್ಲಿ, ಕೋಲಾರ ಜಿಲ್ಲಾ ಒಕ್ಕಲಿಗರ ಪರ ಸಂಘ ಸಂಸ್ಥೆಗಳ ಒಕ್ಕೂಟವು ಈಗ ಸಕ್ರಿಯವಾಗಿ ಜಿಲ್ಲೆಯ ಐಕ್ಯತೆಗಾಗಿ ಕಾರ್ಯನಿರ್ವಹಿಸುತ್ತಿದೆ.
ಇದರ ಭಾಗವಾಗಿ, ಸೆಪ್ಟೆಂಬರ್ 8, 2025, ಸೋಮವಾರ ಮಧ್ಯಾಹ್ನ 2 ಗಂಟೆಗೆ, ಒಂದು ಮಹತ್ವದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ, ಸಾಮಾಜಿಕ ಮತ್ತು ಆರ್ಥಿಕ ಜಾತಿಗಣತಿ ಕುರಿತು ಅರಿವು ಮೂಡಿಸಲು, ನಮ್ಮ ಸಮುದಾಯದ ಭೈರವೈಕ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಮಠದ ಈಗಿನ ಪೀಠಾಧ್ಯಕ್ಷರಾದ ಪರಮಪೂಜ್ಯ ಮಹಾಜ್ಞಾನಿ ಡಾ. ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಮತ್ತು ನಮ್ಮೆಲ್ಲರ ಕೋಲಾರ ಜಿಲ್ಲೆಯ ಪರಮಪೂಜ್ಯ ಶ್ರೀ ಶ್ರೀ ಶ್ರೀ ವಿದ್ಯಾಗುರು ಮಂಗಳನಾಥ ಸ್ವಾಮೀಜಿ ಅವರು ದಿವ್ಯ ಸಾನಿಧ್ಯ ವಹಿಸಿ, ಸಮುದಾಯದ ಐಕ್ಯತೆ ಹಾಗೂ ಜಾತಿಗಣತಿಯ ಅರಿವಿನ ಕುರಿತು ಕಾರ್ಯಾಗಾರವನ್ನು ನಡೆಸಿಕೊಡಲಿದ್ದಾರೆ.
ಆದ್ದರಿಂದ, ದಯವಿಟ್ಟು ಎಲ್ಲ ಒಕ್ಕಲಿಗ ಬಂಧುಗಳು ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು, ಪರಮಪೂಜ್ಯ ಡಾ. ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಆಶೀರ್ವಾದ ಪಡೆದು, ನಮ್ಮ ಸಮುದಾಯದ ಐಕ್ಯತೆಯನ್ನು ಕಾಪಾಡುವಲ್ಲಿ ಸಹಕರಿಸಬೇಕೆಂದು ಕೋಲಾರ ಜಿಲ್ಲಾ ಒಕ್ಕಲಿಗರ ಪರ ಸಂಘ ಸಂಸ್ಥೆಗಳ ಒಕ್ಕೂಟವು ಈ ಮೂಲಕ ಮನವಿ ಮಾಡಿಕೊಳ್ಳುತ್ತಿದೆ.
ಇಂತಿ,
ಕೋಲಾರ ಜಿಲ್ಲಾ ಒಕ್ಕಲಿಗರ ಪರ ಸಂಘ ಸಂಸ್ಥೆಗಳ ಒಕ್ಕೂಟ