ಕೋಲಾರ ಜಿಲ್ಲಾ ಒಕ್ಕಲಿಗರ ಸಂಘದ ‘ಅರಾಜಕತೆ’ಗೆ ಮುಕ್ತಿ ಎಂದು? 40 ವರ್ಷಗಳ ಶೂನ್ಯ ಸಾಧನೆಯ ‘ನಟಸಾರ್ವಭೌಮ’ ಕೆ.ವಿ. ಶಂಕರಪ್ಪನವರ ಆಡಳಿತ ದ್ರೋಹದ ವಿಶೇಷ ತನಿಖಾ ವರದಿ!
ಈ ಬಾರಿಯ ಸಂಕ್ರಾಂತಿಯ ಶುಭಾಶಯಗಳು ಅನ್ವರ್ಥವಾಗಬೇಕೆಂದರೆ, ಸಮುದಾಯವನ್ನು ವಂಚಿಸುತ್ತಿರುವ ಇಂತಹ ಶಕ್ತಿಗಳನ್ನು ಮಟ್ಟಹಾಕಲು ನ್ಯಾಯಯುತ ಮಾರ್ಗವನ್ನು ಭಯಪಡದೆ ದೃಢವಾಗಿ ರೂಢಿಸಿಕೊಳ್ಳಬೇಕು. ಕೋಲಾರ ಜಿಲ್ಲಾ ಒಕ್ಕಲಿಗರ ಸಂಘಕ್ಕೆ ಕೂಡಲೇ ಪಾರದರ್ಶಕ ಚುನಾವಣೆ ನಡೆದು, ಹೊಸ ರಕ್ತದ ಹರಿವಾಗಬೇಕು. ಸಮುದಾಯಕ್ಕೆ ನ್ಯಾಯ ಸಿಗುವವರೆಗೆ ಈ ಹೋರಾಟ ನಿಲ್ಲಬಾರದು.
COMMUNITY BLOGSFEDERATION ACTIVITIES
Rohan kumar K
1/14/20261 min read


ಕೋಲಾರ ಜಿಲ್ಲಾ ಒಕ್ಕಲಿಗರ ಸಂಘದ ‘ಅರಾಜಕತೆ’ಗೆ ಮುಕ್ತಿ ಎಂದು? 40 ವರ್ಷಗಳ ಶೂನ್ಯ ಸಾಧನೆಯ ‘ನಟಸಾರ್ವಭೌಮ’ ಕೆ.ವಿ. ಶಂಕರಪ್ಪನವರ ಆಡಳಿತ ದ್ರೋಹದ ವಿಶೇಷ ತನಿಖಾ ವರದಿ!
ಕೋಲಾರ: ಕೃಷಿಯನ್ನೇ ನಂಬಿ, ರಾಸುಗಳನ್ನು ಪೂಜಿಸಿ, ಬೆವರು ಸುರಿಸಿ ಮಣ್ಣನ್ನೇ ಹೊನ್ನಾಗಿಸುವ ಕೋಲಾರ ಜಿಲ್ಲೆಯ ಬಹುಸಂಖ್ಯಾತ ಒಕ್ಕಲಿಗ ಸಮುದಾಯಕ್ಕೆ ಇಂದು ಸಂಕಷ್ಟದ ಕಾಲ. ಸಮುದಾಯದ ರಕ್ಷಣೆಗೆ ಇರಬೇಕಾದ ‘ಕೋಲಾರ ಜಿಲ್ಲಾ ಒಕ್ಕಲಿಗರ ಸಂಘ’ವು ಕಳೆದ ನಾಲ್ಕು ದಶಕಗಳಿಂದ ಒಬ್ಬ ವ್ಯಕ್ತಿಯ ಸರ್ವಾಧಿಕಾರಕ್ಕೆ ಬಲಿಯಾಗಿದೆ. ಈ ಕುರಿತು ನಮ್ಮ ಮಾಧ್ಯಮವು ತನಿಖಾ ಪತ್ರಿಕೋದ್ಯಮದ (Investigative Journalism) ನೈತಿಕ ಚೌಕಟ್ಟಿನಲ್ಲಿ ನಡೆಸಿದ ಕಾರ್ಯಾಚರಣೆಯು ಆಘಾತಕಾರಿ ಸತ್ಯಗಳನ್ನು ಹೊರಹಾಕಿದೆ.
ನಂಬಿಸಿ ಕುತ್ತಿಗೆ ಕುಯ್ಯುವ ‘ಕಳ್ಳಕ’ ಆಡಳಿತ!
ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಕೆಲಸ ಮಾಡಬೇಕಾದ ಜಿಲ್ಲಾ ಅಧ್ಯಕ್ಷ ಕೆ.ವಿ. ಶಂಕರಪ್ಪನವರು ಕಳೆದ 40 ವರ್ಷಗಳಿಂದ ಈ ಪೀಠದಲ್ಲಿ ಕುಳಿತು ಮಾಡಿರುವ ಸಾಧನೆ ಮಾತ್ರ ‘ಶೂನ್ಯ’. ಸ್ವಾಮೀಜಿಗಳು ಬಂದಾಗ ಫೋಟೋಗಳಿಗೆ ಪೋಸ್ ಕೊಡುವ ಮತ್ತು ಚುನಾವಣೆ ಬಂದಾಗ ಎದ್ದು ಕುಣಿಯುವ ಇವರು, ವಾಸ್ತವದಲ್ಲಿ ಒಕ್ಕಲಿಗರ ಆತ್ಮವಿಶ್ವಾಸವನ್ನೇ ಪಾತಾಳಕ್ಕೆ ತಳ್ಳಿದ್ದಾರೆ. ಒಕ್ಕಲಿಗರನ್ನು ನಂಬಿಸಿ ಸಮುದಾಯದ ಹಿತಾಸಕ್ತಿ ಹಾಗೂ ಆಸ್ತಿಗಳನ್ನು ತಮ್ಮ ವೈಯಕ್ತಿಕ ಲಾಭಕ್ಕಾಗಿ ಮಾರಿಕೊಳ್ಳುವ ಇವರ ‘ಕಳ್ಳಕ’ ಜೀವನದ ವೈಖರಿಯು ಇದೀಗ ಬಯಲಾಗಿದೆ. ರೈತ ಸಮುದಾಯದ ಅಭಿವೃದ್ಧಿ ಬಿಟ್ಟು, ಜಿಲ್ಲೆಯಲ್ಲಿ ‘ಮಾಲ್’ ಸಂಸ್ಕೃತಿಯ ಮೊರೆ ಹೋಗಿರುವ ಇವರ ನಡೆಯು ನೈತಿಕ ಅಧಃಪತನಕ್ಕೆ ಸಾಕ್ಷಿಯಾಗಿದೆ.
ಜಿಲ್ಲಾಡಳಿತಕ್ಕೆ ಸವಾಲು ಹಾಕುತ್ತಿರುವ ‘ಶಂಕರಪ್ಪ ಪಟಾಲಂ’
ಸಂಘದಲ್ಲಿ ನಡೆಯುತ್ತಿರುವ ಹಣಕಾಸಿನ ಅವ್ಯವಹಾರ ಮತ್ತು ಕಾನೂನು ಉಲ್ಲಂಘನೆಗಳನ್ನು ಪ್ರಶ್ನಿಸಬೇಕಾದ ಜಿಲ್ಲಾ ನೋಂದಣಾಧಿಕಾರಿಗಳನ್ನು (District Registrar) ಈ ಪಟಾಲಂ ಅತ್ಯಂತ ಕೀಳಾಗಿ ಕಾಣುತ್ತಿದೆ. "ಜಿಲ್ಲಾ ನೋಂದಣಾಧಿಕಾರಿಗಳು ನಮ್ಮ ತೋಟದ ಉದುರಿದ ಎಲೆಗೂ ಸಮವಲ್ಲ, ಅವರು ನಮ್ಮ ಕೈಗೊಂಬೆ, ಅವರಿಂದ ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ" ಎಂದು ಶಂಕರಪ್ಪನವರ ಅನುಯಾಯಿಗಳು ಸಾರ್ವಜನಿಕವಾಗಿ ಹೀಯಾಳಿಸುತ್ತಿರುವುದು ಜಿಲ್ಲಾಡಳಿತದ ಅಸ್ತಿತ್ವಕ್ಕೇ ಸವಾಲು ಹಾಕಿದಂತಿದೆ. ಆದರೆ ಈ ‘ಭ್ರಮಾಲೋಕದ ಸರದಾರ’ನಿಗೆ ಸತ್ಯದ ದರ್ಶನ ಶೀಘ್ರದಲ್ಲೇ ಆಗಲಿದೆ. ಅಧಿಕಾರಿಗಳು ಯಾರ ಕೈಗೊಂಬೆಯೂ ಅಲ್ಲ ಮತ್ತು ಸತ್ಯಕ್ಕೆ ದೂರವಾದ ಈ ಮಾತುಗಳಿಗೆ ಕಾನೂನು ಸದ್ಯದಲ್ಲೇ ಉತ್ತರ ನೀಡಲಿದೆ.
ವಕೀಲ ವೃತ್ತಿಗೆ ನ್ಯಾಯ – ಒಕ್ಕಲಿಗರಿಗೆ ಅನ್ಯಾಯ?
ಸ್ವತಃ ಕಾನೂನು ತಜ್ಞರು ಮತ್ತು ವಕೀಲರೂ ಆಗಿರುವ ಶಂಕರಪ್ಪನವರು ಕಾನೂನಿನ ಬಗ್ಗೆ ಮಾತನಾಡುವುದರಲ್ಲಿ ಎತ್ತಿದ ಕೈ. ಆದರೆ ಸಂಘದ ನಡಾವಳಿಗಳನ್ನು ಗಾಳಿಗೆ ತೂರಿ, ಜಿಲ್ಲಾ ನೋಂದಣಾಧಿಕಾರಿಗಳ ಕಚೇರಿಗೆ ಹಾಜರಾಗದೆ ತಪ್ಪಿಸಿಕೊಳ್ಳುತ್ತಿರುವುದೇಕೆ? ಕೇವಲ ವೇದಿಕೆಗಳ ಮೇಲೆ ಮಿಂಚುವ ಇವರಿಗೆ ತನಿಖಾ ಅಧಿಕಾರಿಗಳನ್ನು ಎದುರಿಸಲು ನಡುಕವೇಕೆ? ಈ ಪ್ರಶ್ನೆಗಳು ಇಂದು ಪ್ರತಿಯೊಬ್ಬ ಒಕ್ಕಲಿಗ ಬಾಂಧವರನ್ನು ಕಾಡುತ್ತಿದೆ.
ಸಂಕ್ರಾಂತಿಯ ಸಂಕಲ್ಪ: ಬದಲಾವಣೆಯ ಕಾಲ ಸನ್ನಿಹಿತ
ರಾಸುಗಳನ್ನು ಪೂಜಿಸುವ ಸಂಸ್ಕೃತಿಯುಳ್ಳ ಒಕ್ಕಲಿಗರು ಇನ್ನು ಮುಂದೆ ಮೌನವಾಗಿರಬಾರದು. ಈ ಬಾರಿಯ ಸಂಕ್ರಾಂತಿಯ ಶುಭಾಶಯಗಳು ಅನ್ವರ್ಥವಾಗಬೇಕೆಂದರೆ, ಸಮುದಾಯವನ್ನು ವಂಚಿಸುತ್ತಿರುವ ಇಂತಹ ಶಕ್ತಿಗಳನ್ನು ಮಟ್ಟಹಾಕಲು ನ್ಯಾಯಯುತ ಮಾರ್ಗವನ್ನು ಭಯಪಡದೆ ದೃಢವಾಗಿ ರೂಢಿಸಿಕೊಳ್ಳಬೇಕು. ಕೋಲಾರ ಜಿಲ್ಲಾ ಒಕ್ಕಲಿಗರ ಸಂಘಕ್ಕೆ ಕೂಡಲೇ ಪಾರದರ್ಶಕ ಚುನಾವಣೆ ನಡೆದು, ಹೊಸ ರಕ್ತದ ಹರಿವಾಗಬೇಕು. ಸಮುದಾಯಕ್ಕೆ ನ್ಯಾಯ ಸಿಗುವವರೆಗೆ ಈ ಹೋರಾಟ ನಿಲ್ಲಬಾರದು.
ಒಕ್ಕಲಿಗ ಸಮುದಾಯದ ಪರಮೋಚ್ಚ ನಟಸಾರ್ವಭೌಮ ಶಂಕರಪ್ಪನವರೇ, ನೆನಪಿರಲಿ – ನಿಮ್ಮ ಅಹಂಕಾರದ ಆಟಕ್ಕೆ ಮಂಕುಬಡಿಯುವ ಕಾಲ ಹತ್ತಿರ ಬಂದಿದೆ!