ಕೋಲಾರ ಜಿಲ್ಲಾ ಒಕ್ಕಲಿಗರ ಸಂಘ: ಅವ್ಯವಸ್ಥೆ ಪ್ರಶ್ನಿಸಿ; ಸಮುದಾಯದ ಹಿತಕ್ಕಾಗಿ ಡಿ. 30 ರಂದು ಸಭೆಗೆ ಬನ್ನಿ!

ಕೋಲಾರ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ವಿ. ಶಂಕರಪ್ಪನವರ ನೇತೃತ್ವದಲ್ಲಿ ನಡೆದ ಸುದೀರ್ಘ ಅವ್ಯವಸ್ಥೆ ಮತ್ತು ಶೂನ್ಯ ಸಾಧನೆ ಕುರಿತು ಸಮುದಾಯದಲ್ಲಿ ತೀವ್ರ ಅಸಮಾಧಾನವಿದ್ದು, ಜಿಲ್ಲಾ ಕೇಂದ್ರದಲ್ಲಿ ಒಕ್ಕಲಿಗರಿಗಾಗಿ ಕಚೇರಿ ಇಲ್ಲದಿರುವುದು ಹಾಗೂ ಸಂಘದ ಪದಾಧಿಕಾರಿಗಳ ರಾಜಕೀಯ ಹಿತಾಸಕ್ತಿ ಮತ್ತು ನಿರ್ದೇಶಕರುಗಳ ಬೇಜವಾಬ್ದಾರಿತನ ಪ್ರಮುಖ ಆರೋಪಗಳಾಗಿವೆ. ಇದನ್ನು ಪ್ರಶ್ನಿಸಲು ರೋಹನ್ ಗೌಡ ಸೇರಿದಂತೆ ಹಲವು ಮುಖಂಡರು ಸೇರಿರುವ 'ಒಕ್ಕಲಿಗರ ಪರ ಸಂಘ ಸಂಸ್ಥೆಗಳ ಒಕ್ಕೂಟ'ವು ಜಿಲ್ಲಾ ನೋಂದಣಾಧಿಕಾರಿಗಳಿಗೆ ಪತ್ರ ಬರೆದು ಗಮನ ಸೆಳೆದಿದ್ದು, ಅಧಿಕಾರಿಗಳು ಸ್ಪಂದಿಸಿ, ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗೆ ಸ್ಪಷ್ಟೀಕರಣ ನೀಡಲು ಡಿಸೆಂಬರ್ 30, 2025 ರಂದು (ಪತ್ರದಲ್ಲಿರುವ ದಿನಾಂಕ) ಹಾಜರಾಗಲು ಸೂಚಿಸಿದ್ದಾರೆ. ಸಮುದಾಯದ ಹಿತಾಸಕ್ತಿ ಕಾಪಾಡಲು ಮತ್ತು ಸಂಘದ ಭವಿಷ್ಯದ ಬಗ್ಗೆ ನಿರ್ಧರಿಸಲು, ಎಲ್ಲ ಕುಲಬಾಂಧವರು ಶನಿವಾರ, ಡಿಸೆಂಬರ್ 28, 2025, ಬೆಳಿಗ್ಗೆ 10:30 ಗಂಟೆಗೆ ಪಾಲ್ಗೊಳ್ಳುವಂತೆ ಒಕ್ಕೂಟ ಮನವಿ ಮಾಡಿದೆ.

COMMUNITY BLOGSFEDERATION ACTIVITIES

ROHANN KUMAR K

12/17/20251 min read

ಕೋಲಾರ ಜಿಲ್ಲಾ ಒಕ್ಕಲಿಗರ ಸಂಘ: ಅವ್ಯವಸ್ಥೆ ಪ್ರಶ್ನಿಸಿ; ಸಮುದಾಯದ ಹಿತಕ್ಕಾಗಿ ಡಿ. 30 ರಂದು ಸಭೆಗೆ ಬನ್ನಿ!

ಕೋಲಾರ: ಕೋಲಾರ ಜಿಲ್ಲಾ ಒಕ್ಕಲಿಗರ ಸಂಘದ ಸುದೀರ್ಘ ಅವ್ಯವಸ್ಥೆಯ ಆಡಳಿತಾವಧಿಯಲ್ಲಿ ಸಮುದಾಯದ ಹಿತಾಸಕ್ತಿಗಳು ಸಂಪೂರ್ಣವಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಈಗ ಈ ವಂಚನೆ ಹಾಗೂ ಬೇಜವಾಬ್ದಾರಿತನವನ್ನು ಪ್ರಶ್ನಿಸುವ ನಿರ್ಣಾಯಕ ಸಮಯ ಬಂದಿದೆ.

ಕೆ. ವಿ. ಶಂಕರಪ್ಪನವರ ಆಡಳಿತಾವಧಿ: ಕಛೇರಿ ಇಲ್ಲ, ಸಾಧನೆ ಶೂನ್ಯ!

ಸುದೀರ್ಘ ಕಾಲದಿಂದ ಜಿಲ್ಲಾ ಸಂಘದ ಅಧಿಕಾರ ವಹಿಸಿರುವ ಕೆ. ವಿ. ಶಂಕರಪ್ಪನವರ ನೇತೃತ್ವದ ಆಡಳಿತವು ಒಕ್ಕಲಿಗ ಸಮುದಾಯದ ಮೂಲಭೂತ ಅವಶ್ಯಕತೆಗಳನ್ನೂ ಪೂರೈಸುವಲ್ಲಿ ವಿಫಲವಾಗಿದೆ ಎಂಬುದು ಸಮುದಾಯದ ಪ್ರಬಲ ದೂರು.

  • ವೇದಿಕೆಗಳ ಕೊರತೆ: ಸಮುದಾಯದ ಹಿತಾಸಕ್ತಿಗಳ ವಿಚಾರವನ್ನು ಚರ್ಚಿಸಲು ಅಥವಾ ಸಂಘಟನೆಯ ಚಟುವಟಿಕೆಗಳನ್ನು ತಿಳಿದುಕೊಳ್ಳಲು ಇಲ್ಲಿಯವರೆಗೆ ಯಾವುದೇ ವೇದಿಕೆ ಇರಲಿಲ್ಲ.

  • ಕಚೇರಿಯ ದುಸ್ಥಿತಿ: ಜಿಲ್ಲಾ ಕೇಂದ್ರದಲ್ಲಿ ಕುಲಬಾಂಧವರು ತಮ್ಮ ಮಾತುಗಳನ್ನು ಹೇಳಿಕೊಳ್ಳಲು ಒಂದು ಕಚೇರಿಯು ಗತಿ ಇರಲಿಲ್ಲ. ಆದರೆ, ಕೆ. ವಿ. ಶಂಕರಪ್ಪನವರಿಗೆ ಉತ್ತಮ ಕಚೇರಿಯಿದ್ದರೂ, ಅದು ತಮ್ಮ ರಾಜಕೀಯ ಜೀವನಕ್ಕೆ ತೊಂದರೆಯಾಗಬಹುದೆಂಬ ಭೀತಿಯಿಂದ ಎಲ್ಲಿಯೂ 'ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷರು' ಎಂಬ ಫಲಕವಿರುವುದಿಲ್ಲ. ಅವರ ಮೊದಲ ಆದ್ಯತೆ ಒಕ್ಕಲಿಗರೇತರ ಗುರುತಿಕೆ ಆಗಿದೆ ಎಂಬ ಟೀಕೆ ಇದೆ.

  • ನಿರ್ದೇಶಕರ ಬೇಜವಾಬ್ದಾರಿತನ: ವೈಯಕ್ತಿಕವಾಗಿ ಮತ್ತು ಆರ್ಥಿಕವಾಗಿ ಸದೃಢರಾಗಿದ್ದರೂ, ತಾವು ಒಕ್ಕಲಿಗರು ಎಂದು ಸಾರ್ವಜನಿಕವಾಗಿ ಹೇಳಿಕೊಳ್ಳಲು ಧೈರ್ಯ ಸಾಲದ ನಿರ್ದೇಶಕರುಗಳು, ತಮ್ಮ ರಾಜಕೀಯ/ವಾಣಿಜ್ಯ ಚಟುವಟಿಕೆಗಳಿಗೆ ಕಚೇರಿಗಳನ್ನು ಹೊಂದಿದ್ದರೂ, ಜಿಲ್ಲಾ ಕೇಂದ್ರದಲ್ಲಿ ಒಕ್ಕಲಿಗರಿಗಾಗಿ ಒಂದು ಕಚೇರಿ ಮಾಡುವ ಆಲೋಚನೆ ಸಹ ಮಾಡದಿರುವುದು ಅವರ ದೌರ್ಬಲ್ಯ ಮತ್ತು ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ.

  • ಶೂನ್ಯ ಸಾಧನೆ: ಜಿಲ್ಲಾ ಒಕ್ಕಲಿಗರ ಸಂಘ ಮಾಡಿರುವ ಸಾಧನೆ ಏನೂ ಇಲ್ಲದ ಕಾರಣ ಅವರ ಬಗ್ಗೆ ವಿವರಿಸುತ್ತಾ ಹೋದರೆ ಮಹಾ ಗ್ರಂಥ ಬರೆದರೂ ಸಾಲದು ಎಂದು ಸಮುದಾಯದ ಮುಖಂಡರು ಬೇಸರ ವ್ಯಕ್ತಪಡಿಸಿದ್ದಾರೆ.

ಒಕ್ಕೂಟದ ಜಾಗೃತಿ: ಕಾನೂನು ಕ್ರಮಕ್ಕೆ ಅಧಿಕಾರಿಗಳ ಸಹಕಾರ

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ, "ಕೋಲಾರ ಜಿಲ್ಲಾ ಒಕ್ಕಲಿಗರ ಪರ ಸಂಘ ಸಂಸ್ಥೆಗಳ ಒಕ್ಕೂಟ"ವನ್ನು (Mulbagilu, Kolar, Maluru, Srinivasapura, Bangarapet, KGF ಭಾಗದ ಕುಲಬಾಂಧವರು) ಚಾಲನೆಗೊಳಿಸಲಾಗಿದೆ.

ಸಂಘದ ಅಸಮರ್ಥ ನಿರ್ದೇಶಕರುಗಳ ಬೀಜವಾಬ್ದಾರಿತನದಿಂದಾಗಿ ವರ್ಷಾನುಗಟ್ಟಲೆ ಹಾಸ್ಟೆಲ್ ಚಟುವಟಿಕೆಗಳು ಸ್ಥಗಿತಗೊಂಡು, ಜಮೀನು ನುಂಗಿ ಆಟವಾಡುತ್ತಿದ್ದ ಸಂದರ್ಭದಲ್ಲಿ, ಸಮುದಾಯ ಜಾಗೃತವಾಗುತ್ತಿದೆ ಎಂಬ ಭಯದಿಂದ ಇತ್ತೀಚೆಗೆ ಜಾಗ ಖರೀದಿ ಮುಗಿಸಿ ಹಾಸ್ಟೆಲ್ ಮಾಡಲು ಶಂಕುಸ್ಥಾಪನೆ ನಡೆದಿರುವುದನ್ನು ದೊಡ್ಡ ಸಾಧನೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಒಕ್ಕೂಟ ಅಭಿಪ್ರಾಯಪಟ್ಟಿದೆ.

ಸಂಘದ ಬೇಜವಾಬ್ದಾರಿತನಕ್ಕೆ ಅಂತ್ಯ ಹಾಡಲು, ಒಕ್ಕೂಟದ ಪ್ರಮುಖರಾದ ರೋಹನ್ ಗೌಡ (ROHANN KUMAR K), ಶ್ರೀಮತಿ ರತ್ನಮ್ಮನವರು(ವಕೀಲರು, ಹೋರಾಟಗಾರರು), ರಾಜಪ್ಪ ಗೌಡರು, ಕೃಷ್ಣೆಗೌಡರು (ಜಿಲ್ಲಾ ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿ), ಪಾಲಾಕ್ಷಗೌಡರು, ಮಧುಕರ್ ಗೌಡರು, ಜಗದೀಶ್ ಗೌಡರು, ಶ್ರೀಮತಿ ಸರಸ್ವತಿ ರವರು, ರಾಜಣ್ಣ, ಸಿವಿ ಶ್ರೀನಿವಾಸ್, ತಿರುಮಲೇಶ್ ಹಾಗೂ ರವಿ ಸೇರಿದಂತೆ ಅನೇಕರು ಜಿಲ್ಲಾ ನೋಂದಣಾಧಿಕಾರಿಗಳಿಗೆ ಕಾನೂನು ರೀತಿಯ ಪತ್ರ ಬರೆದಿದ್ದಾರೆ.

ಇದಕ್ಕೆ ಸ್ಪಂದಿಸಿರುವ ಜಿಲ್ಲಾ ನೋಂದಣಾಧಿಕಾರಿಗಳು, ಸಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯುತ್ತಾ, ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗೆ ಸ್ಪಷ್ಟೀಕರಣ ಮತ್ತು ಉತ್ತರ ನೀಡುವಂತೆ ಪತ್ರ ಬರೆದಿದ್ದಾರೆ.

ಪ್ರಮುಖ ಸೂಚನೆ: ಜಿಲ್ಲಾ ನೋಂದಣಾಧಿಕಾರಿಗಳ ಪತ್ರದ (ಸಂಖ್ಯೆ: 193/2000-01, ದಿನಾಂಕ: 11-12-2025) ಪ್ರಕಾರ, ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮ 1960 ಕಲಂ 11 ರ ಅಡಿಯಲ್ಲಿ ವಿವರಣೆ/ಉತ್ತರ ನೀಡಲು ದಿನಾಂಕ 30-12-2025 ರಂದು ಬೆಳಿಗ್ಗೆ 10.30 ಗಂಟೆಗೆ ನಿಗದಿಪಡಿಸಲಾಗಿದೆ.

ಎಲ್ಲರೂ ಪಾಲ್ಗೊಳ್ಳಿ: ಸಮುದಾಯದ ಭವಿಷ್ಯಕ್ಕಾಗಿ ಈ ದಿನಾಂಕ ಮುಖ್ಯ!

ಗೌರವಾನ್ವಿತ ಜಿಲ್ಲಾ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನಿಗದಿಯಾಗಿರುವ ವಿಚಾರಣೆಯ ದಿನವನ್ನು ಸಮುದಾಯವು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು.

ಸಮುದಾಯದ ನೋವುಗಳನ್ನು ಪ್ರಶ್ನಿಸಲು, ಜನರಲ್ ಬಾಡಿ ಮೀಟಿಂಗ್ ನಡೆಸಲು, ಭವಿಷ್ಯದ ಚುನಾವಣೆಗಳಿಗೆ ಮತ್ತು ಶೋಷಣೆಗೊಳಗಾಗುತ್ತಿರುವ ಕುಲಬಾಂಧವರ ಪರವಾಗಿ ಒಂದು ನಿರ್ದಿಷ್ಟ ವ್ಯವಸ್ಥೆಯನ್ನು ಕಲ್ಪಿಸಲು, ಹಾಗೂ ಸುಳ್ಳು ಅಟ್ರಾಸಿಟಿ ಪ್ರಕರಣಗಳನ್ನು ಕಾನೂನು ರೀತಿಯಲ್ಲಿ ಪ್ರಶ್ನಿಸುವ ವ್ಯವಸ್ಥೆ ಸಾಧಿಸಲು ಈ ಸಭೆ ನಿರ್ಣಾಯಕವಾಗಿದೆ.

ಆದ್ದರಿಂದ, ಕೋಲಾರ ಜಿಲ್ಲೆಯಾದ್ಯಂತ ಇರುವ ಎಲ್ಲ ಒಕ್ಕಲಿಗ ಕುಲಬಾಂಧವರು ತಮ್ಮ ವೈಯಕ್ತಿಕ ಸ್ವಾರ್ಥಗಳನ್ನು ಮರೆತು, ಸಮುದಾಯದ ಹಿತದೃಷ್ಟಿಯಿಂದ ಶನಿವಾರ, ದಿನಾಂಕ 28-12-2025 ರಂದು ಬೆಳಿಗ್ಗೆ 10.30 ಗಂಟೆಗೆ ಈ ವಿಷಯಗಳ ಪರಿಪಕ್ವ ಅರಿವನ್ನು ಪಡೆದು ಪಾಲ್ಗೊಳ್ಳಬೇಕು ಎಂದು ಒಕ್ಕೂಟ ಮನವಿ ಮಾಡಿದೆ.