ಒಕ್ಕಲಿಗರ ಸಮುದಾಯದ ಐಕ್ಯತೆ ಮತ್ತು ಸಮಗ್ರತೆ - ಮುಂದಿನ ಪೀಳಿಗೆಗಾಗಿ ರೋಹನ್ ಗೌಡರ ಕರೆ
ಸ್ವಾಭಿಮಾನವೇ ತಮ್ಮ ಮೊದಲ ಆಸ್ತಿ ಹಾಗೂ ಒಕ್ಕಲುತನದ ಸಾಂಪ್ರದಾಯಿಕ ಒಗ್ಗಟ್ಟೇ ಅವರ ಮೂಲ ಶಕ್ತಿ. ನೈಜ ಆಚರಣೆಯಿಂದ ಪೂರ್ವಜರ ಹುಟ್ಟಿನಿಂದಲೇ ಬಳುವಳಿಯಾಗಿ ನೀಡಿರುವ ಸಂಪ್ರದಾಯ ಮತ್ತು ಗೌರವ ಕೀರ್ತಿಗಳನ್ನು ಪಡೆದು ಬರುವ ಹೆಮ್ಮೆಯ ಒಕ್ಕಲಿಗರು ಇಂದು ಜಾಗೃತ ರಾಗ ಬೇಕಾಗಿರುವ ಅವಶ್ಯಕತೆ ನಿಜಕ್ಕೂ ಅತ್ಯವಶ್ಯಕ.
COMMUNITY BLOGSFEDERATION ACTIVITIES
Rohan Gowdru
10/14/20251 min read


ಒಕ್ಕಲಿಗ ಸಮುದಾಯದ ಐಕ್ಯತೆ ಮತ್ತು ಸಮಗ್ರತೆ: ಮುಂದಿನ ಪೀಳಿಗೆಗಾಗಿ ರೋಹನ್ ಗೌಡರ ತುರ್ತು ಕರೆ
ಸ್ವಾಭಿಮಾನವೇ ತಮ್ಮ ಮೊದಲ ಆಸ್ತಿ ಹಾಗೂ ಒಕ್ಕಲುತನದ ಸಾಂಪ್ರದಾಯಿಕ ಒಗ್ಗಟ್ಟೇ ಅವರ ಮೂಲ ಶಕ್ತಿ. ನೈಜ ಆಚರಣೆಯಿಂದ ಪೂರ್ವಜರ ಹುಟ್ಟಿನಿಂದಲೇ ಬಳುವಳಿಯಾಗಿ ನೀಡಿರುವ ಸಂಪ್ರದಾಯ ಮತ್ತು ಗೌರವ ಕೀರ್ತಿಗಳನ್ನು ಪಡೆದು ಬರುವ ಹೆಮ್ಮೆಯ ಒಕ್ಕಲಿಗರು ಇಂದು ಜಾಗೃತ ರಾಗ ಬೇಕಾಗಿರುವ ಅವಶ್ಯಕತೆ ನಿಜಕ್ಕೂ ಅತ್ಯವಶ್ಯಕ.
ಸಮುದಾಯದ ಮೂಲ ಶಕ್ತಿಯಾದ ಒಗ್ಗಟ್ಟನ್ನು ಮರೆತು, ಇಂದು ನಾವು ವಿಘಟನೆ ಮತ್ತು ನಿರ್ಲಕ್ಷ್ಯದತ್ತ ಸಾಗುತ್ತಿದ್ದೇವೆ. ಈ ಕುರಿತು ಮುಳಬಾಗಿಲು ತಾಲೂಕಿನ ಸಮುದಾಯದ ಕಾರ್ಯಕರ್ತರಾದ ರೋಹನ್ ಗೌಡ ಅವರು ವ್ಯಕ್ತಪಡಿಸಿದ ಆತಂಕ ಮತ್ತು ಸಲಹೆಗಳು ಇಲ್ಲಿವೆ:
ನಾಯಕತ್ವ ಮತ್ತು ಸ್ವಾರ್ಥದ ಕೊಂಡಿ
ಇಷ್ಟು ವರ್ಷಗಳ ಸಮುದಾಯದ ಕುಲಬಾಂಧವರ ಸಹಾಯದಿಂದ ಅನೇಕರು ನಾಯಕತ್ವದಲ್ಲಿ ಬೆಳೆದಿದ್ದಾರೆ, ಇನ್ನು ಹಲವರು ವಿವಿಧ ಪಕ್ಷಗಳಲ್ಲಿ ಒಳ್ಳೆಯ ಹುದ್ದೆಗಳನ್ನು ಪಡೆದು ಇಂದು ಮಂತ್ರಿಗಳಾಗಿ ಹೊರಹಮ್ಮಿದ್ದಾರೆ. ಇನ್ನು ಮುಳಬಾಗಿಲು ತಾಲೂಕಿನ ವಿಚಾರ ಮಾತನಾಡುವುದಾದರೆ, ಅನೇಕರು ಸಮುದಾಯದ ಹೆಸರಿನಲ್ಲಿ ಮನೆ ಕಟ್ಟಿಸಿ, ಸಮುದಾಯದ ದುಡ್ಡಿನಲ್ಲೇ ಬೆಳೆದು ಇಂದು ಸಮಾಜದಲ್ಲಿ ಸದೃಢರು ಎಂದು ಕರೆಸಿಕೊಂಡಿದ್ದಾರೆ. ಹಾಗೂ ಕೇವಲ ಅವರು ಒಕ್ಕಲಿಗರು ಎಂಬ ಒಂದು ಕಾರಣಕ್ಕೆ ಸಮಾಜದಲ್ಲಿ ರಾಜಕೀಯ ಕ್ಷೇತ್ರದ ಉನ್ನತ ಹುದ್ದೆಗಳೆ ಅಲ್ಲದೆ ಸಹಕಾರ ಕ್ಷೇತ್ರದಲ್ಲಿ ಒಳ್ಳೆಯ ಮನ್ನಣೆ ಮತ್ತು ಹೈನುಗಾರಿಕಾ ವಲಯದ ನಿರ್ದೇಶಕ ಸ್ಥಾನಗಳು ಸಹ ಲಭ್ಯವಾಗಿವೆ.
ಇನ್ನು ಮುಂದುವರಿಸಿ ಹೇಳುವುದಾದರೆ, ಕೆಲವರು ಅನ್ಯ ಒಕ್ಕಲಿಗರಲ್ಲದ ಜಾತಿಗಳ ಅಥವಾ ಧರ್ಮಗಳ ಓಲೈಕೆಗಾಗಿ ತಾವು ವಿಶ್ವಮಾನವರು ಎಂಬಂತೆ ಸಮುದಾಯದ ಸಂಘಟನೆಗಳಿಂದ ಸಮಾಜಮುಖಿಯಲ್ಲಿ ಕಾಣಿಸಿಕೊಳ್ಳಲು ಹಿಂಜರಿಯುತ್ತಾರೆ ಮತ್ತು ಸಮುದಾಯ ನನಗೇನು ಮಾಡಿದೆ ಸಮುದಾಯದ ವಿಷಯ ನನಗೆ ಬೇಡ ಎಂದು ಹೇಳುತ್ತಲೇ ಸಮುದಾಯದ ಚೌಕಟ್ಟಿನಲ್ಲಿ ತಮ್ಮ ಮನೆ ಮಕ್ಕಳು ಎಲ್ಲರೂ ನೆಂಟಸ್ತಿಕೆ ಬೆಳೆಸಿ ಸಂರಕ್ಷಿತರಾಗುತ್ತಾರೆ. ಅಂತಹ ಕೆಲವರು ನಮ್ಮ ಮುಳಬಾಗಿಲು ತಾಲೂಕಿನ ಉದ್ಯಮಶೀಲರಲ್ಲೂ ಇದ್ದಾರೆ. ಮೂಲತಹ ಜನರು ನಂಬಿಕೆಯಿಂದ ತಮ್ಮ ಮಕ್ಕಳಿಗೆ ಮತ್ತು ಮುಂದಿನ ಸಮುದಾಯದ ಭವಿಷ್ಯಕ್ಕೆ ಅವಶ್ಯಕತೆ ಇದ್ದಾಗ ನಿಲ್ಲುತ್ತಾರೆ ಎಂಬುವ ನಂಬಿಕೆಯಿಂದ ಅನೇಕ ಕ್ಷೇತ್ರಗಳಲ್ಲಿ ನಾಯಕತ್ವಗಳನ್ನು ಪ್ರೋತ್ಸಾಹಿಸಿ, ಮೇಲು ಕೀಳು, ಒಳ್ಳೆಯದು ಕೆಟ್ಟದ್ದು ಎಂದು ಭೇದ ಭಾವವಿಲ್ಲದೆ ನಮ್ಮ ಸಮುದಾಯದ ವ್ಯಕ್ತಿ ಎಂದು ಗೌರವಿಸಿ ಅವಕಾಶಗಳನ್ನು ನೀಡಿದ್ದಾರೆ ಮತ್ತು ನೀಡುತ್ತಲೇ ಇದ್ದಾರೆ.
ಘನತೆಯ ಮೇಲಿನ ದಾಳಿ ಮತ್ತು ಐಕ್ಯತೆಯ ಕೊರತೆ
ಮುಳಬಾಗಿಲಿನ ಒಕ್ಕಲಿಗರ ವಿಚಾರವಾಗಿ ಈ ಅವಲೋಕನ ಅನಿವಾರ್ಯವಾಗಿದೆ, ಸಮುದಾಯದ ಐಕ್ಯತೆ ಅಂದಿನಿಂದ ಇಲ್ಲಿಯವರೆಗೆ ಗಣನೀಯವಾಗಿ ಕ್ಷೀಣಿಸಿದೆ. ಹೀಗೆ ಮುಂದುವರೆದರೆ ಸಮುದಾಯದ ಸಂಖ್ಯೆ ಇದ್ದರೂ ಸಹ ಸಮುದಾಯ ಎಂಬ ಮಾತಿಗೆ ಅರ್ಥವೇ ಇರುವುದಿಲ್ಲ... ಇದಕ್ಕೆ ನೈಜ ಉದಾಹರಣೆ ಎಂದರೆ ಮೊನ್ನೆ ನಡೆದ ವಾಲ್ಮೀಕಿ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ನೆರೆಯ ಶ್ರೀನಿವಾಸಪುರದ ಹಾಗೂ ಇಂದಿನ ನಮ್ಮ ಮುಳಬಾಗಿಲು ತಾಲೂಕಿನ ಪ್ರಸ್ತುತ ಶಾಸಕ ಸ್ಥಾನ ಸೇವೆ ಸಲ್ಲಿಸುತ್ತಿರುವ ಸಮೃದ್ಧಿ ವಿ ಮಂಜುನಾಥ್ ಇವರು ಮೂಲತಹ ಆದಿ ಕರ್ನಾಟಕ ಅಂದರೆ ಹಿಂದುಳಿದ ವರ್ಗಗಳ ಒಲೆಯ (Holeya) ಅಥವಾ ಬಲಗೈ ಸಮುದಾಯ (Right Community) ಸೇರಿದ ಶಾಸಕರಾಗಿರುತ್ತಾರೆ, ಇಲ್ಲಿಯವರೆಗೆ ಒಕ್ಕಲಿಗರ ಪಕ್ಷ ಎಂದೇ ಕುಟುಂಬ ರಾಜಕಾರಣ ಎಂದೆ ಹೆಸರುಗಳಿಸಿರುವ ಜೆಡಿಎಸ್ ಪಕ್ಷ ಅವರಿಗೆ ಅವಕಾಶ ನೀಡಿ ದೇವೇಗೌಡರ ಕುಟುಂಬದ ಸದಸ್ಯನಂತೆ ಇವರನ್ನು ಕಂಡಿರುತ್ತಾರೆ ಮತ್ತು ಇವರ ಜೊತೆಗೆ ಎಲ್ಲಿಯೂ ಯಾವುದೇ ರೀತಿಯ ಅಸ್ಪೃಶ್ಯತೆ ಅಥವಾ ಜಾತಿ ನಿಂದನೆ ವಿಚಾರಗಳು ಇಲ್ಲಿಯವರೆಗೆ ಪಕ್ಷದಲ್ಲಿ ಎಲ್ಲಾ ಜಾತಿಯವರು ಇದ್ದರು ಎಲ್ಲೂ ನಡೆದಿರುವುದಿಲ್ಲ. ಒಂದು ವೇಳೆ ನಡೆದಿದ್ದರೆ ಅದು ಕಾನೂನಿನ ಪ್ರಕಾರ ಕ್ರಮ ಜರುಗಿಸಲಾಗುತ್ತಿತ್ತು ಮತ್ತು ಇವರಿಗೆ ಮುಳಬಾಗಿಲಿನಲ್ಲಿ ಶಾಸಕರಾಗಲು ಆಗುತ್ತಿರಲಿಲ್ಲ... ಇಂದು ಅವರ ಸ್ಥಾನಮಾನ ಗಳಿಸುವ ವಿಚಾರಕ್ಕೆ ಮೀಸಲಾತಿ ಕ್ಷೇತ್ರದ ಮುಳಬಾಗಿಲು ತಾಲೂಕಿನಲ್ಲಿ ಅವರ ಜೊತೆಯೇ ಸದಾ ಇರುವ ಅನೇಕ ಒಕ್ಕಲಿಗ ಸಮುದಾಯದ ಪ್ರತಿನಿಧಿಗಳು ಹಾಗೂ ಅವರದೇ ಪಕ್ಷದ ದೊಡ್ಡ ಗೌಡರು ಎಲ್ಲರೂ ಇದ್ದು ಸಹ, ಮೊನ್ನೆಯ ವಾಲ್ಮೀಕಿ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಕೆಲವು ವ್ಯಕ್ತಿಗಳ ಮೇಲಿರುವ ವೈಯಕ್ತಿಕ ದ್ವೇಷದಿಂದ ಅವರ ಹೆಸರುಗಳನ್ನು ಹೇಳಲು ಅವರು ಭಯ ಪಟ್ಟರು. ಆದರೆ ಅವರಿಗೆ ಕೇವಲವಾಗಿ ಕಂಡದ್ದು ಇಡೀ ಒಕ್ಕಲಿಗ ಸಮುದಾಯ ಇರಬಹುದು, ಏಕೆಂದರೆ ಅಲ್ಲಿನ ಸಭೆಯಲ್ಲಿ ನೆರೆದಿದ್ದ ಅಧಿಕಾರಿಗಳಿಗೆ ಅವರು ಹೀಗೆ ಹೇಳುತ್ತಾರೆ: "SC ST ಎಂದರೆ ಅಷ್ಟು ಸುಲಭಾನ ಆದರೆ HIGHER Caste ಗಳಿಗೆ ಆದರೆ ಅವರಿಗೆಲ್ಲ Respect ಕೊಟ್ಟು ವಾಣ್ಣಿ ಪಿಲಿ ವೀಣ್ಣಿ ಪಿಲಿ ಆ ಗೌಡ್ನೀಪಿಲಿ ಈ ಗೌಡ್ನೀಪಿಲಿ ಯಾಕೆ ಇವರಿಗೆ ಯಾಕೆ ಎಲ್ಲಾತರ ಮಾಡಿಕೊಡೋಕೆ ಆಗಲ್ಲ" ಹೀಗೆ ಹೇಳಬೇಕಾದರೆ ಅವರ ಸುತ್ತಮುತ್ತಲಿನ ಅವರಿಗೆ ತಿಳಿದಿರುವ ಯಾವ ಗೌಡ ಈ ರೀತಿ ಮಾಡಿದ್ದಾನೆ ಎಂದು ಎತ್ತಿ ಹಿಡಿಯಲಿ, ಆದರೆ ಒಂದು ಸಮುದಾಯವನ್ನು ಅಷ್ಟು ಕೆಟ್ಟದಾಗಿ ಕಾಣಬೇಕಾದರೆ ಪಾಪ ನಾವು ಅವರ ಪಕ್ಷದ ಹಲವಾರು ಗೌಡರನ್ನು ಗೆಲ್ಲಿಸಿಕೊಟ್ಟಿದ್ದೇವೆ. ಬಹುಶಹ ಆ ಎಲ್ಲ ಗೌಡರು ಇವರನ್ನು ಸರಿಯಾಗಿ ನಡೆಸಿಕೊಂಡಿಲ್ಲ ಆದ್ದರಿಂದ ಇವರಿಗೆ ಇಡೀ ತಾಲೂಕಿನ ಗೌಡರ ಮೇಲೆ ಅಸಮಾಧಾನ ಇರಬೇಕು. ಇದಕ್ಕೆ ಮುಖ್ಯ ಕಾರಣ ಎಂದರೆ ನಾವೆಲ್ಲರೂ ಸಮುದಾಯದ ಕುಲಬಾಂಧವರು ಒಂದಿಷ್ಟು ಜನರನ್ನು ಮಾತ್ರ ನಾಯಕರನ್ನಾಗಿ ತಂದಿರುವುದು ಹಾಗೂ ನಮ್ಮ ಸಮುದಾಯದ ಹಿರಿಯರ ಗೌರವ ಮತ್ತು ಘನತೆಯನ್ನು ಮತ್ತು ಇತಿಹಾಸವನ್ನು ಎಲ್ಲರಿಗೂ ತಿಳಿಸುವ ಕೆಲಸ ಮಾಡದೇ ಇರುವುದು.
ಪಾಪ, ಸಮೃದ್ಧಿ ವಿ ಮಂಜುನಾಥ್ ರವರಿಗೆ ನಮ್ಮ ಒಕ್ಕಲಿಗರು ಈ ತಾಲೂಕಿಗೆ ಎಷ್ಟು ದಾನ ಧರ್ಮ ಮಾಡಿದ್ದಾರೆ, ಎಂತಹ ನಾಯಕರುಗಳು ನಮ್ಮ ಸಮುದಾಯದಿಂದ ನಮ್ಮ ತಾಲೂಕಿನಲ್ಲಿ ಸೇವೆ ಸಲ್ಲಿಸಿದ್ದಾರೆ ಹಾಗೂ ಇಂದು ಅವರು ನಡೆದಾಡುವ ಅದೆಷ್ಟೋ ಕಚೇರಿಗಳನ್ನು ದಾನ ಮಾಡಿರುವುದು ನಮ್ಮ ಒಕ್ಕಲಿಗರೇ ಹಾಗೂ ಅವರು ಇಂದು ಹೋಗಿ ವಿಧಾನಸೌಧ ಎಂದು ಹೆಮ್ಮೆಯಿಂದ ಮಾತನಾಡಲು ಅದನ್ನು ಕಟ್ಟಿಸಿದವರು ನಮ್ಮ ಕೆಂಗಲ್ ಹನುಮಂತಯ್ಯನವರು. ಅವರು ನಮ್ಮ ಒಕ್ಕಲಿಗರೇ ಹಾಗೂ ಬೆಂಗಳೂರಿನ ಸಂಸ್ಥಾಪಕರಾದ ನಾಡ ಹೆಮ್ಮೆಯ ನಾಡಪ್ರಭು ಅವರು ಒಕ್ಕಲಿಗರೇ. ಹೀಗೆ ಹೇಳುತ್ತಾ ಹೋದರೆ ನಮ್ಮ ಸಂವಿಧಾನದ ಪುಸ್ತಕಕ್ಕಿಂತ ಹೆಚ್ಚು ಪುಟಗಳು ಕೇವಲ ಒಂದು ಪರ್ಸೆಂಟ್ ಒಕ್ಕಲಿಗರ ಸಾಧನೆಗೆ ಸಾಲುತ್ತದೆ. ಇದಕ್ಕೆ ಕಾರಣ ಕೇವಲ ಒಬ್ಬ ವ್ಯಕ್ತಿಯ ಮನಸ್ಸಿನಲ್ಲಿರುವ ಜಾತಿವಾದವೇ ಅಲ್ಲ ಬದಲಿಗೆ ಇದರ ಅರ್ಥವೇನೆಂದರೆ ನಮ್ಮ ಒಕ್ಕಲಿಗರು ತಾಲೂಕಿನಲ್ಲಿ ಐಕ್ಯತೆಯಿಂದ ಇಲ್ಲ ಹಾಗೂ ನಮ್ಮ ಒಕ್ಕಲಿಗರು ಒಳ್ಳೆಯ ನಾಯಕರುಗಳನ್ನು ಸಮಾಜಕ್ಕೆ ಚುನಾಯಿಸುವುದರಲ್ಲಿ ಸೋತಿದ್ದಾರೆ ಅಥವಾ ಯೋಗ್ಯರಲ್ಲದವರು ಎಂದು ಹೇಳಬಹುದು.
ಶೋಷಣೆ ಮತ್ತು ಸೂಕ್ತ ನಾಯಕತ್ವದ ಅವಶ್ಯಕತೆ
ಅದೇನೆ ಇರಲಿ, ಸಮಾಜದಲ್ಲಿ ಅತಿ ಹೆಚ್ಚು ಶೋಷಣೆಗೆ ಒಳಗಾಗುತ್ತಿರುವುದು ಇಂದು ಒಕ್ಕಲಿಗರೇ. ನಮ್ಮ ಮುಳಬಾಗಿಲು ತಾಲೂಕು ಮೀಸಲಾತಿ ಕ್ಷೇತ್ರವಾದರೂ ಇಲ್ಲಿ ಸಂವಿಧಾನದ ಅಳವಡಿಕೆ ನಯಾ ಪೈಸೆ ಇರುವುದಿಲ್ಲ ಏಕೆಂದರೆ ಕೆಲವು ಸಂಘಟನೆಗಳು ಬಾಬಾ ಸಾಹೇಬ್ ಅಂಬೇಡ್ಕರ್ ರವರ ಹೆಸರಿನಲ್ಲಿ ಇದ್ದರೂ ಸಹ ಕಾನೂನಾತ್ಮಕವಾಗಿ ಕಾರ್ಯಾಂಗ ಶಾಸಕಾಂಗ ನ್ಯಾಯಾಂಗ ಎಂಬ ವಿಧಾನವನ್ನು ಅನುಸರಿಸದೆ ಏಕಾಏಕಿ ಧರಣಿ ಮಾಡುವುದು ಮತ್ತು ಹಲವಾರು ವಿಷಯಗಳಲ್ಲಿ ಸುಳ್ಳು ಜಾತಿ ನಿಂದನೆ ಕೇಸ್ ಗಳನ್ನು ಹಾಕಿರುವುದು ಈಗಾಗಲೇ ಜಿಲ್ಲೆಯ ಅನೇಕ ಉದಾಹರಣೆಗಳು ಸಾಕ್ಷಿ ಸಮೇತ ಸಿಗುತ್ತದೆ. ಅದನ್ನು ಬೇಕಾದರೆ ನಾವು ಜಿಲ್ಲಾ ವಾರು ಎಷ್ಟು ಕೇಸುಗಳು ಜಾತಿ ನಿಂದನೆ ಅಡಿಯಲ್ಲಿ ದಾಖಲಾಗಿದೆ ಮತ್ತು ಅದರಲ್ಲಿ ಎಷ್ಟು ಕೇಸ್ಗಳು ರುಜು ಆಗಿದೆ ಎಂದು ಪರಿಶೀಲಿಸಿದರೆ ತಿಳಿಯುತ್ತದೆ.
ಹಿಂದುಳಿದ ವರ್ಗಗಳ ಅನೇಕ ಸಂಘಟನೆಗಳು ತಮ್ಮ ಯಾವುದೇ ಸಣ್ಣ ಸಮಸ್ಯೆಗೆ ಬೀದಿಗಿಳಿದು ನ್ಯಾಯಕ್ಕಾಗಿ ನಗರದಲ್ಲಿ ಹೋರಾಟ ಮಾಡುತ್ತಾರೆ ಆದರೆ ವಿಪರ್ಯಾಸ ಸಮಾಜಕ್ಕೆ ಅನ್ನ ನೀಡುವ ಜಾತೀಯತೆ ಇಲ್ಲದ ಅನ್ನ ಬೆಳೆದು ಕೊಡುವ ಒಕ್ಕಲಿಗರ ಸಮಸ್ಯೆಗಳಿಗೆ ನಿಲ್ಲುವ ಒಬ್ಬರು ನಾಯಕರು ಮುಳಬಾಗಿಲು ತಾಲೂಕಿನಲ್ಲಿ ಇಲ್ಲದಿರುವುದು ನಿಜಕ್ಕೂ ಶೋಚನೀಯ.
ಸಮಸ್ಯೆ ಬಂದರೆ ನಾಲ್ಕು ಗೋಡೆ ಮಧ್ಯೆ ಇತ್ಯರ್ಥ ಮಾಡುವ ಬ್ರೋಕರ್ಗಳಂತೆ ಕಾಣುವ ನಾಯಕರು ನಮಗೆ ಬೇಕೆ? ಸಮಸ್ಯೆಗಳು ಬಂದಾಗ ಸಮಾಜದಲ್ಲಿ ಧ್ವನಿ ಎತ್ತುವ, ಸತ್ಯಕ್ಕಾಗಿ ನಿಲ್ಲುವ, ನ್ಯಾಯಕ್ಕಾಗಿ ದುಡಿಯುವ, ನಿಷ್ಠಾವಂತ ಮತ್ತು ಧೈರ್ಯ ಹೊಂದಿರುವ ಕೆಂಪೇಗೌಡರ ಆದರ್ಶಗಳನ್ನು ಪಾಲಿಸುವ ವ್ಯಕ್ತಿತ್ವಗಳನ್ನು ನಾವು ಬೆಳೆಸಬೇಕಿದೆ. ಇದಕ್ಕಾಗಿ ನಮಗೆ ಐಕ್ಯತೆ ಬೇಕಿದೆ ಮತ್ತು ಮುಳಬಾಗಿಲು ತಾಲೂಕು ಒಕ್ಕಲಿಗರ ಸಂಘದ ಆಶಯಗಳ ಅಳವಡಿಕೆಗೆ ಶಕ್ತಿ ತುಂಬಲು ಇನ್ನಾದರೂ ಯೋಚನೆ ಮಾಡದೆ ದುಡ್ಡು ನೀಡುತ್ತಿದ್ದ ಸಮುದಾಯದ ನಾಯಕರುಗಳು... ಯಾರು ಸರಿ ಯಾರು ಇಲ್ಲ ಎಂಬುದನ್ನು ಗುರುತಿಸಿ ಪ್ರಬುದ್ಧ ಸಂಘಟನೆಗಳನ್ನು ಬೆಳೆಸಬೇಕು ಇಲ್ಲದಿದ್ದರೆ ಮುಂದೊಂದು ದಿನ ಅವರು ಎಷ್ಟೇ ಹಣ ಸಂಪಾದನೆ ಮಾಡಿರಲಿ, ಇಂದು ಗೌಡರನ್ನು ಕಡೆಗಣಿಸಿ ಮಾತನಾಡಿರುವ ಶಾಸಕರನ್ನು ಹೊಂದಿರುವ ನಮ್ಮ ತಾಲೂಕಿನಲ್ಲಿ ಮುಂಬರುವ ದಿನಗಳಲ್ಲಿ ನಿಮ್ಮನ್ನು ನಾಯಕರು ಎಂದು ಹೇಳಲು ಸಮುದಾಯ ಶಕ್ತಿಹೀನವಾಗುತ್ತದೆ ಎಂಬುದನ್ನು ಮರೆಯದಿರಿ.
ರೋಹನ್ ಗೌಡರ ಅಂತಿಮ ಕರೆ
ದೇಶಕ್ಕಾಗಿ ಒಕ್ಕಲಿಗರ ಐಕ್ಯತೆ ಬಹಳ ಪ್ರಮುಖ ಮತ್ತು ಈ ಮಣ್ಣಿನ ಸೇವೆಗಾಗಿ ಒಕ್ಕಲಿಗರ ಐಕ್ಯತೆ ಬಹಳ ಅವಶ್ಯಕ. ಮುಂದಿನ ಪೀಳಿಗೆಗೆ ನಮ್ಮ ಸಂಪ್ರದಾಯ, ಸ್ವಾಭಿಮಾನ ಮತ್ತು ಕೀರ್ತಿಯನ್ನು ಉಳಿಸಿ, ಗಟ್ಟಿಯಾದ, ನಿರ್ಭೀತ ಮತ್ತು ನ್ಯಾಯಪರ ನಾಯಕತ್ವವನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಲು ಪ್ರತಿಯೊಬ್ಬ ಒಕ್ಕಲಿಗರೂ ಜಾಗೃತರಾಗಬೇಕು. ನಮ್ಮ ಐಕ್ಯತೆಯೇ ನಮ್ಮ ನಿಜವಾದ ಸಂಪತ್ತು.
ಸಮಾಜದಲ್ಲಿ ಸಾಮರಸ್ಯ ಮತ್ತು ಒಳ್ಳೆಯ ಆಡಳಿತ ತರಲು ಒಕ್ಕಲಿಗರಿಂದ ಮಾತ್ರ ಸಾಧ್ಯ ಇದು ಇತಿಹಾಸ ಹೇಳುತ್ತದೆ, ಒಕ್ಕಲಿಗರು ಸಾಮರಸ್ಯ ಮತ್ತು ಜಾತ್ಯಾತೀತ ಭೂಮಿ ತಾಯಿಯ ಸೇವಕರು...
ಜೈ ಶ್ರೀ ಗುರುದೇವ